ಪ್ಯಾಕಿಡರ್ಮೇಟ -
ಖಡ್ಗಮೃಗ, ಆನೆ, ನೀರಾನೆ, ಹಂದಿ. ಹೈರ್ಯಾಕ್ಸ್ ಮೊದಲಾದ ಗೊರಸುಳ್ಳ, ಮೆಲುಕು ಹಾಕದ, ದಪ್ಪ ಚರ್ಮವುಳ್ಳ ಸ್ತನಿಗಳನ್ನು ಒಳಗೊಳ್ಳುವಂತೆ ರೂಪಿಸಲಾಗಿದ್ದ ಗುಂಪಿನ ಹೆಸರು. ಇವೆಲ್ಲ ಪ್ರಾಣಿಗಳಲ್ಲಿ ದಪ್ಪ ಚರ್ಮ ವಿನಾ ಇನ್ಯಾವುದೇ ರಚನಾ ಸಾದೃಶ್ಯ ಕಂಡುಬರುವುದಿಲ್ಲ. ಆದ್ದರಿಂದ ಇಂದು ಈ ಹೆಸರು ಬಳಕೆಯಲ್ಲಿಲ್ಲ. 
(ಎ.ಎಸ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ